Tuesday, October 21, 2025
spot_imgspot_imgspot_imgspot_img
spot_img
HomeUncategorizedಅಂಚೆ ಕಚೇರಿ ಕೇವಲ ಪತ್ರ ವಿತರಣೆಗಷ್ಟೇ ಸೀಮಿತವಾಗಿಲ್ಲ

ಅಂಚೆ ಕಚೇರಿ ಕೇವಲ ಪತ್ರ ವಿತರಣೆಗಷ್ಟೇ ಸೀಮಿತವಾಗಿಲ್ಲ

ಶಿರಸಿ: ಅಂಚೆ ಕಚೇರಿ ಕೇವಲ ಪತ್ರ ವಿತರಣೆಗಷ್ಟೇ ಸೀಮಿತವಾಗಿಲ್ಲ, ಕೇಂದ್ರದ ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ನಗರದ ಮುಖ್ಯ ಅಂಚೆಕಚೇರಿಯಲ್ಲಿ ನಡೆದ ಭಾರತೀಯ ಅಂಚೆ ಇಲಾಖೆಯ ಪ್ರಧಾನಮಂತ್ರಿ ವಿಶ್ವಕರ್ಮ ಟೂಲ್ ಕಿಟ್ ಮತ್ತು ಅಪಘಾತ ವಿಮಾ ಪರಿಹಾರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಬ್ರಿಟಿಷರ ಶಿಕ್ಷಣದ ಮನಸ್ಥಿತಿಯಿಂದ ಹೊರಬಂದು ಸ್ವಾವಲಂಬಿ ಜೀವನ ನಡೆಸಲು ಕೇಂದ್ರ ಸರ್ಕಾರವು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ತಿಳಿಸಿದರು.

ಅಂಚೆ ಇಲಾಖೆ ದೇ

ಶದ ಹೆಮ್ಮೆಯ ಸಂಸ್ಥೆ

ಯಾಗಿ ಬೆಳೆದಿದ್ದು, ನಗರ ಮತ್ತು ಗ್ರಾಮೀಣ ಭಾಗದ ಜನರಿಗೆ ಉತ್ತಮ ಸೇವೆ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಂಚೆ ಕಚೇರಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಶಿರಸಿಯಲ್ಲಿ 1876 ರಲ್ಲಿ ಆರಂಭಗೊಂಡ ಅಂಚೆ ಕಚೇರಿ ಸುದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಸುಮಾರು 500 ಅಂಚೆ ಕಚೇರಿಗಳು ಮತ್ತು 1300 ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಬಗ್ಗೆ ಪ್ರಶಂಸೆ:

ಸಂಸದ ಕಾಗೇರಿ ಅವರು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಎಂದು ಬಣ್ಣಿಸಿದರು. ದೇಶದ ಭವಿಷ್ಯವನ್ನು ಗಮನದಲ್ಲಿಟ್ಟು

ಕೊಂಡು ಪ್ರಧಾನಿ ಮೋದಿ ಈ ಯೋಜನೆಯನ್ನು ರೂಪಿಸಿದ್ದಾರೆ. ಮೊದಲ ಹಂತದಲ್ಲಿ 18 ವಿಭಾಗಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸುಮಾರು 10 ಸಾವಿರ ಜನರು ಅರ್ಹರೆಂದು ಗುರುತಿಸಲಾಗಿದ್ದು, 5 ಸಾವಿರ ಜನರಿಗೆ ತರಬೇತಿ ನೀಡಲಾಗಿದೆ. ತರಬೇತಿಯ ಅವಧಿಯಲ್ಲಿ ದಿನಕ್ಕೆ ₹500 ನೀಡಲಾಗುತ್ತದೆ. ತರಬೇತಿ ಹೊಂದಿದ ಫಲಾನುಭವಿಗಳಿಗೆ ಮೊದಲ ಹಂತದಲ್ಲಿ ತಲಾ ₹1 ಲಕ್ಷದಂತೆ ₹35 ಕೋಟಿ ವಿತರಿಸಲಾಗಿದೆ. ಈ ಮೊತ್ತವನ್ನು 15 ತಿಂಗಳೊಳಗೆ ಮರುಪಾವತಿ ಮಾಡಿದರೆ, ಎರಡನೇ ಹಂತದಲ್ಲಿ ₹2 ಲಕ್ಷ ಸಾಲ ಪಡೆಯಬಹುದು. ಇದನ್ನು 30 ತಿಂಗಳೊಳಗೆ ಮರುಪಾವತಿ ಮಾಡಬೇಕು ಎಂದು ತಿಳಿಸಿದರು.

ಅಪಘಾತ ವಿಮೆಯ ಪ್ರಯೋಜನಗಳು:

ಅಪಘಾತಗಳಿಂದ ಆಕಸ್ಮಿಕ ಸಾವು ಹೆಚ್ಚಾಗುತ್ತಿದ್ದು

, ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಅಂಚೆ ಕಚೇರಿಯ ಅಪಘಾತ ವಿಮೆ ಮಹತ್ವದಾಗಿದೆ. ಕೇವಲ ₹20 ವಾರ್ಷಿಕ ಕಂತು ಪಾವತಿಸಿದರೆ ₹2 ಲಕ್ಷ ಮತ್ತು ₹565 ಪಾವತಿಸಿದರೆ ₹10 ಲಕ್ಷ ಪರಿಹಾರ ಪಡೆಯಬಹುದು ಎಂದು ಅವರು ಹೇಳಿದರು.

ಶಿರಸಿ ಅಂಚೆ ವಿಭಾಗದ ಅಧೀಕ್ಷಕ ಹೂವಪ್ಪ.ಜಿ ಮಾತನಾಡಿ, ವಿಶ್ವಕರ್ಮರ ಕುಲ ಕಸುಬನ್ನು ಹೆಚ್ಚಿಸಲು ಸರ್ಕಾರ ತರಬೇತಿ ಹಾಗೂ ಸಲಕರಣೆ ಕಿಟ್‌ಗಳನ್ನು ವಿತರಿಸುತ್ತಿದೆ. ಶಿರಸಿ ಮತ್ತು ಕಾರವಾರ ವಿಭಾಗಗಳಲ್ಲಿ 5,179 ಟೂಲ್‌ ಕಿಟ್‌ಗಳನ್ನು ವಿತರಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ 10 ಮರಣ ಪ್ರಕರಣಗಳಿಗೆ ತಲಾ ₹10 ಲಕ್ಷ ಪರಿಹಾರ ಮತ್ತು 54 ಅಪಘಾತಗಳಲ್ಲಿ ಗಾಯಗೊಂಡವರಿಗೆ ವೈದ್ಯಕೀಯ ವೆಚ್ಚದ ನೆರವು ನೀಡಲಾಗಿದೆ. ಒಟ್ಟಾರೆ 8,805 ಜನರಿಗೆ ಅಪಘಾತ ವಿಮೆಯ ಪರಿಹಾರ ವಿತರಣೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ನಾಮನಿರ್ದೇಶಿತ ಸದಸ್ಯ ಗುರುಪ್ರಸಾದ ಹೆಗಡೆ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ್ ಭಟ್, ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಅಧಿಕಾರಿ ಸವಿತಾ ಭಟ್ಟ ಸ್ವಾಗತಿಸಿದರು ಮತ್ತು ಅಂಚೆ ಸಿಬ್ಬಂದಿ ಭವ್ಯಾ ಭಟ್ಟ ಪ್ರಾರ್ಥಿಸಿದರು.

RELATED ARTICLES
- Advertisment -
Google search engine

Most Popular