ನಮ್ಮೂರ ಹತ್ತಿರ ಹಳಿಯಾಳ ಎನ್ನುವ ಊರಿದೆ. ಆ ಊರಿನಲ್ಲಿ ಬಂಗಾರ್ಯ ನಾಯ್ಕ ಎನ್ನುವ ಹಿರಿಯ ವ್ಯಕ್ತಿಯೊಬ್ಬರಿದ್ದಾರೆ. ಅವರು ಆ ಊರಿನ ಮಾರಿ ದೇವಸ್ಥಾನದ ಪೂಜಾರಿಯು ಹೌದು. ಇವರಿಗೆ ಯಕ್ಷಗಾನದಲ್ಲಿ ಪಾತ್ರ ಮಾಡುವ ಚಟ ಜೋರು. ತಮ್ಮ ಮನೆಯ ಸಮಾರಾಧಾನೆಯಲ್ಲಿ ಒಂದು ಯಕ್ಷಗಾನ ಏರ್ಪಡಿಸಿ ಅಲ್ಲಿ ತಾವೊಂದು ಮುಖ್ಯ ಪಾತ್ರವನ್ನು ಮಾಡುತ್ತಿದ್ದರು. ಸಾಮಾನ್ಯವಾಗಿ ಪ್ರತಿವರ್ಷವೂ ಗದಾಯುದ್ಧ ಪ್ರಸಂಗವೇ ಇರುತ್ತಿತ್ತು. ಕಾರಣವೆಂದರೆ ಇವರಿಗೆ ಕೌರವನ ಪಾತ್ರ ಮಾಡುವುದರಲ್ಲಿ ಬಹಳ ಆಸಕ್ತಿ. ಪ್ರತಿ ಬಾರಿಯೂ ಇದು ನನ್ನ 101ನೇ ಕೌರವ ಎನ್ನುತ್ತಿದ್ದರು.
ಆಟ ಪ್ರಾರಂಭದಿಂದಲೇ ಅಪಭ್ರಂಶತೆಯು ಪ್ರಾರಂಭ. ‘ಕುರುರಾಯ ಅದನೆಲ್ಲ ಕಂಡು ಸಂತಾಪದಿ ತನ್ನೇಯ ಭಾಗ್ಯವೆನುತ’ ಎನ್ನುವ ಪದ್ಯದೊಂದಿಗೆ ಕೌರವನ ಪ್ರವೇಶ ಎಲ್ಲಾ ಯಕ್ಷಗಾನದಲ್ಲೂ ಆಗುತ್ತದೆ. ಆದರೆ ಬಂಗಾರ್ಯ ಅವರ ಕೌರವನ ಪಾತ್ರ ಪ್ರವೇಶವಾಗುವುದೇ ‘ಕುರುರಾಯ ಅದನೆಲ್ಲ ಕಂಡು ಸಂತೋಷದಿ’ ಎಂದು. ಅದಕ್ಕೆ ಕಾರಣವು ಉಂಟುತೊಂತ್ತೊಂಬತ್ತು ಜನ ತಮ್ಮಂದಿರನ್ನು ಪಾಮಡವರು ಕೊಂದರು ತನ್ನನ್ನು ಮಾತ್ರ ಕೊಲ್ಲಲಿಕ್ಕೆ ಆಗಲಿಲ್ಲವಲ್ಲ ಎನ್ನು ಸಂತೋಷ. ಪ್ರೇಕ್ಷಕರು ಚಪ್ಪಾಳೆ ಹೊಡೆದಂತೆ ಕೌರವನ ಕುಣಿತವು ಜೋರಾಗಿ ಸಾಗುತ್ತಿತ್ತು. ಕೃಷ್ಣನ ಕಂಡಾಗ ಕೌರವ ಹೇಳುವ ಅರ್ಥವು ಅಷ್ಟೇ ಸೊಗಸು ಱ ಏನಾ ಕಪಟಿ ನೀನು ವಿದುರನ ಮನೆ ಕಡವಾರದಲೆಲ್ಲ ಹಾಲು ಹರ್ಸಿಯಂತೆ

ಮಾದ್ಲಮನೆ ಎನ್ನುವ ಹಳ್ಳಿ ಅಲ್ಲೊಬ್ಬ ನಾರಾಯಣ ನಾಯ್ಕ ಎನ್ನುವವರಿದ್ದಾರೆ. ಅವರೊಬ್ಬ ಸ್ವಘೋಷಿತ ಸಾಮೀಜಿ. ಶನಿ ದೇವರು ಆರಾಧ್ಯ ದೈವ. ಅದಕ್ಕಾಗಿ ಪ್ರತಿ ವರ್ಷ ಶನಿ ಜಾತ್ರೆ ಮತ್ತು ಯಕ್ಷಗಾನ ವಿಶೇಷವಾಗಿ ಶನಿ ಮಹಾತ್ಮೆ ಯಕ್ಷಗಾನವನ್ನೇ ಆಡುತ್ತಾರೆ. ಶನಿಯ ಪಾತ್ರದಲ್ಲಿ ಸ್ವಾಮಿಯದ್ದೇ. ಇಲ್ಲಿ ಒಂದು ಗಮ್ಮತ್ತು. ಶನಿಗೆ ಬಣ್ಣ ಹಚ್ಚಿಯಾದ ತಕ್ಷಣದಲ್ಲೆ ರಂಗ ಪ್ರವೆಶವಾಗಬೇಕು. ರಂಗ ಬಂದ ಕೂಡಲೇ ಶನಿ ನಾರಾಯಣ ನಾಯ್ಕನ ಮೈಮೇಲೆ ಬರುತ್ತದೆ. ವಿಕ್ರಮನ ಪಾತ್ರಧಾರಿ ಮಾತೇ ಆಡಬಾರದು ಒನ್ನೊಮ್ಮೆ ಮಾತನಾಡಿದರೆ ಶನಿ ರೂಪದಲ್ಲಿರುವ ನಾರಾಯಣ ನಾಯ್ಕ ಕಡಿಯಲಿಕ್ಕೆ ಹೋರಡುತ್ತಾನೆ. ಒಮ್ಮ ವಿಕ್ರಮನ ಪಾತ್ರಧಾರಿ ಗದ್ದೆ ಬಯಲು ಬಿದ್ದು ಓಡಿಹೋಗಿ ಆಟವೇ ನಿಂತಿದೆ.
ಇದೊಂದು ಹಳ್ಳಿಯಲ್ಲೇ ನಡೆದ ಘಟನೆ
ಐದು ಗ್ರಾಮ ತಗೊಂಡು